01-ಕನ್ನಡಾಂಬೆಯ ಹಿರಿಮೆ ಸಾರಾಂಶ
-ಬೆನಗಲ್ ರಾಮರಾವ್
ಕರ್ನಾಟಕ ವಿಶಾಲವಾದ ನಾಡು ಈ ವ್ಯಾಪ್ತಿಯನ್ನು ಮೀರಿ ಹರಡಿದ್ದ ನಾಡಾಗಿತ್ತು ನಮ್ಮ ಜನ ಕನ್ನಡ ಹೆಮ್ಮೆಯಿಂದ ಬಳಸುತ್ತಿದ್ದರು. ವಿಜಯನಗರ ಸಾಮ್ರಾಜ್ಯದ ಪತನ ದ ವರೆಗೆ ಈ ಭಾಗದ ನೆಲವನ್ನಾಳಿದ ರಾಜರು ಕನ್ನಡದಲ್ಲೇ ತಮ್ಮೆಲ್ಲ ವ್ಯವಹಾರಗಳನ್ನು ಮಾಡುತ್ತಿದ್ದರಿಂದ ಕನ್ನಡ ನುಡಿಯ ಸಾಮರ್ಥ್ಯದ ಬಗ್ಗೆ ಸಂಪೂರ್ಣ ವಿಶ್ವಾಸವಿತ್ತು ನನ್ನ ಕಾರಣಗಳಿಂದ ಕನ್ನಡಿಗರು ಬೇರೆ ಬೇರೆ ಭಾಗಗಳಲ್ಲಿ ಚದುರಿದ್ದರಿಂದ ಕನ್ನಡ ಭಾಷೆಯ ಮೇಲೆ ಅಭಿಮಾನ ಕುಗ್ಗಿತ್ತು.
ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ದೇಶದ ಸ್ವಾತಂತ್ರ್ಯಕ್ಕೆ ಚಳುವಳಿ ನಡೆಸಿದ ಕರ್ನಾಟಕದ ಧೀಮಂತ ಚೇತನಗಳು ಕರ್ನಾಟಕದ ಏಕೀಕರಣಕ್ಕೆ ಪಣ ತೊಟ್ಟರು. ಬೆನಗನ್ ರಾಮರಾವ್ ಅವರು 'ಕನ್ನಡಾಂಬೆಯ ಹಿರಿಮೆ' ಕವಿತೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ನಾಡು-ನುಡಿ, ನೆಲ-ಜಲದ ಬಗೆಗೆ ಅಭಿಮಾನ ಹೊಂದಿದ್ದ ಕನ್ನಡಿಗರ ಬಗ್ಗೆ ಈ ಕವಿತೆಯಲ್ಲಿ ಹೇಳಲಾಗಿದೆ.
ಪ್ರಸ್ತುತ ಕವನವನ್ನು ಎಸ್. ಚೆನ್ನಪ್ಪ ರವರು ಸಂಪಾದಿಸಿರುವ 'ಕವಿಗಳ ಕಂಡ ಕರ್ನಾಟಕ' ಕೃತಿಯಿಂದ ಆರಿಸಿಕೊಳ್ಳಲಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಕನ್ನಡ ನಾಡಿನ ಸಂಸ್ಕೃತಿ, ಸಮಗ್ರ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿತ್ತು. ಕನ್ನಡಿಗರಿಗೆ ಕನ್ನಡ ಕೇವಲ ಭಾಷೆ ಮಾತ್ರವಲ್ಲ ಸರ್ವಸ್ವವು ಆಗಿತ್ತು. ಒಂದು ಜೀವಿ ಬದುಕಲು ಗಾಳಿ, ಬೆಳಕು, ನೀರು, ಭೂಮಿ, ಅಗ್ನಿ ಹೇಗೆ ಮುಖ್ಯವೋ ಹಾಗೆ ಕನ್ನಡವೂ ನನಗೆ ಮುಖ್ಯವೆಂದು ಕವಿತೆ ಪ್ರಾರಂಭಿಸಿರುವ ಕವಿ ಎನ್ನ ಕಣ್ಣು ,ಕಿವಿ,ಮೂಗು ಬಾಯಿಯೂ ಕನ್ನಡವೇ ಎಂದಿದ್ದಾರೆ.
ಕನ್ನಡ ಸರಸ್ವತಿ (ಭುವನೇಶ್ವರಿ ದೇವಿ) ವಿಶ್ವ ಮಾನ್ಯತೆ ಪಡೆದಿದ್ದಾಳೆ. ಬಯಸಿದ್ದನ್ನು ಕೊಡುವ ಕಲ್ಪವೃಕ್ಷವಾಗಿದ್ದಾಳೆ. 'ದಕ್ಷಿಣ ಗಂಗೆ ಕಾವೇರಿ' ಗಂಗಾ ನದಿಗೆ ಸರಿಸಮಾನವಾದವಳು. ಕನ್ನಡದ ಸಿರಿ ಸಂಪತ್ತು (ಅರಣ್ಯ ಸಂಪತ್ತು, ದೇವಾಲಯಗಳು, ಸಾಹಿತ್ಯ ಕೃತಿಗಳು, ಅರಮನೆಗಳು, ಕೋಟೆಗಳು, ನದಿ-ಜಲಗಳು) ನನಗೆ ಆಪ್ಯಾಯಮಾನವಾದವುಗಳು ಎಂದಿದ್ದಾರೆ.
ಶಿವರಂಜನಿ ಎಚ್ ಜಿ(ಸಹಾಯಕ ಪ್ರಾಧ್ಯಾಪಕಿ)
ಕನ್ನಡಕ್ಕೆ ಸಮಾನವಾದರೆ, ಪ್ರತಿಷ್ಠೆ ದೊರೆತಿದೆ, ತನಗೆ ದೊರೆತಂತೆ ಹೆಮ್ಮೆಪಡುವ ರಾಮರಾಯರು ತಮಗೆ ವರಮಾನ ಒಂದಷ್ಟು ಸಂತಸ ಪಡುತ್ತಾರೆ. ಕನ್ನಡಿಗರು ಹೇಡಿಗಳಲ್ಲ ಈ ಪುಣ್ಯ ಭೂಮಿಗಳಲ್ಲಿ ಸ್ವಾತಂತ್ರ್ಯವಾಗಿ ಬದುಕಲು ತಾಯಿ ಭುವನೇಶ್ವರಿಯ ಶ್ರೀ ರಕ್ಷೆ ಇದೆ. ಕನ್ನಡ ವಿಶ್ವ ಮನ್ನಣೆ ಪಡೆದು ಅದರ ಕೀರ್ತಿ ಪತಾಕೆ ಅಷ್ಟ ದಿಕ್ಕುಗಳಲ್ಲೂ ಹರಡಿದೆ. ಇದೇ ತನ್ನ ಮನಸ್ಸಿಗೆ ಸ್ಪೂರ್ತಿ ಎಂದು ನವಚೈತನ್ಯಭರಿತವಾಗಿದ್ದಾರೆ. ಚದುರಿರುವ ಕನ್ನಡ ಒಗ್ಗೂಡಿದರೆ ಇದೇ ನನಗೆ ಕಿರೀಟ ಎಂದು ಹೆಮ್ಮೆ ಪಡುತ್ತಾರೆ.
ಕಪ್ಪು ಮಣ್ಣಿನ ನಾಡಿನ ಕರ್ನಾಟಕದ ಮಣ್ಣು ಬರಿಯ ಮಣ್ಣಲ್ಲ ಅದು ಕವಿಗಳ ಪ್ರಕಾರ ನವ-ನಿಧಿ, ಸಿರಿ- ಸಂಪತ್ತು,( ಭೂಮಿಯಿಂದ ಬಂದ ಬೆಳೆ, ಜಲ, ಖನಿಜಗಳು) ಕರ್ನಾಟಕದ ನೀರು ಪರಿಶುದ್ಧವಾದದ್ದು. ಅಮೃತ ಸಮಾನವಾಗಿದ್ದ ಈ ಭೂಮಿಯಲ್ಲಿ ಬೆಳೆಯುವ ಹೂ ಗಿಡಗಳು ಎನಗೆ ಆಭರಣ ಇದ್ಧ ಹಾಗೆ ಕನ್ನಡ ನಾಡು ಸಂಪತ್ಭರಿತವಾಗಿದ್ದು ಬೇಕಾದಷ್ಟು ಪಶು ಪಕ್ಷಿಗಳಿಗೆ ಆಸರೆಯಾಗಿ ಈ ನೆಲದ ಸೊಬಗನ್ನು, ಸಂಪತ್ತನ್ನು ಹೆಚ್ಚಿಸಿದೆ.
ಭುವನೇಶ್ವರಿಯ ದಯೆಯೇ ಕನ್ನಡಿಗರಿಗೆ ಅತಿಶಯ. ಶ್ರೀ ಕೃಷ್ಣ ಪರಮಾತ್ಮನು ಈ ನೆಲದಲ್ಲಿ ನೆಲೆಸಿರುವುದರಿಂದ ಕನ್ನಡಿಗರಿಗೆ ಒಗ್ಗಟ್ಟು. ಕರ್ನಾಟಕದ ಬಲ ಸದೃಢವಾದಂತೆ ; ತಾನೇ ಬಲಶಾಲಿಯಾದಂತೆ ಕನ್ನಡ ಜನರ ಒಗ್ಗಟ್ಟಿನ ಬಗ್ಗೆ ಕರ್ನಾಟಕವನ್ನು ಕಾಪಾಡುವ ಕೈಗಳ ಬಗ್ಗೆ ಹೆಮ್ಮೆಪಟ್ಟಿದ್ದಾರೆ.
ಶಬರಿ ರಾಮನ ದರ್ಶನದ ನಂತರ ಮುಕ್ತಿ ಪಡೆದಂತೆ ಇನ್ನೊಬ್ಬರ ಹಂಗಿನಲ್ಲಿ ಇರುವ ನಮಗೆ ವಿದೇಶಿಯರಿಂದ ಒಂದಲ್ಲ ಒಂದು ದಿನ ಮುಕ್ತಿ ಸಿಕ್ಕೇ ಸಿಗುತ್ತದೆ ಎಂಬ ಆಶಾಭಾವನೆಯನ್ನು ಕವಿ ಈ ಪದ್ಯದಲ್ಲಿ ವ್ಯಕ್ತಪಡಿಸಿದ್ದಾರೆ.
No comments:
Post a Comment