02. ಕನ್ನಡ ರಾಜ್ಯೋತ್ಸವ
ಕೆ. ಎಸ್ .ನರಸಿಂಹ ಸ್ವಾಮಿ
ಕನ್ನಡ ಎಂದರೆ ಅದು ಕೇವಲ ಭಾಷೆಯಲ್ಲ; ಅದೊಂದು ಸಂಸ್ಕೃತಿ ,ಮನೋಧರ್ಮ. ಬ್ರಿಟಿಷ ಕಾಲದಲ್ಲಿ ಅತಾರ್ಕಿಕವಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಮತ್ತೆ ಏಕೀ ಕೃತಗೊಂಡಿದ್ದು ಸ್ವಾತಂತ್ರ್ಯೋತರ ಕಾಲದಲ್ಲೇ. 1956 ನವಂಬರ್ 01 ರಂದು ಒಗ್ಗೂಡಿದ ಕರ್ನಾಟಕದ ಬಗ್ಗೆ ಕವಿ ಮೈದುಂಬಿ ವರ್ಣಿಸುತ್ತಾರೆ.
ಕನ್ನಡಿಗರಿಗೆ ಕರ್ನಾಟಕದ ಏಕೀಕರಣವು ಗಗನ ಕುಸುಮವೆಂದು ಭಾಸವಾಗಿತು. ಏಕೀಕರಣದ ನಿಗೂಢ ನಿರೀಕ್ಷೆಯಲ್ಲಿ ಕನ್ನಡಿಗರ ಆಸೆ ಫಲಿಸಿತು. ಕನ್ನಡ ನಾಡಿಗೆ ಕೊರಳಹಾರವಾಗಿ 'ಕರ್ನಾಟಕ' ಎಂಬ ಅಭಿದಾನ ಲಭಿಸಿತು ಮನೆಮನೆಯ ಮುಂದೆ ಸಂಭ್ರಮದ ರಂಗವಲ್ಲಿಯನ್ನು ಚೆಲ್ಲಿತ್ತು. ಕನ್ನಡ ನಾಡಿನ ಮಣ್ಣು ಕಪ್ಪಾದರೂ ಶ್ರೀಗಂಧದಂತ ಕಂಪನ್ನು ಸೂಸುವಂತದ್ದು. ತಂಪಾದ ನಾಡು. ಈ ಮಣ್ಣಿನಲ್ಲಿ ಬೆಳೆದ ಹಣ್ಣು ಜೇನಿನ ಹನಿ ಎಷ್ಟು ರುಚಿಯಾದದ್ದು ಮಲ್ಲಿಗೆಯನ್ನು ಮುಡಿದ ಸುಂದರಿಯರ ಮಾತು ಇಂಪಾಗಿದೆ ಸುಸಂಸ್ಕೃತವಾಗಿದೆ.
ಕರ್ನಾಟಕವು ಅರಣ್ಯ ಸಂಪತ್ತನ್ನು ಹೊಂದಿರುವ ನಾಡಾಗಿದೆ. ಎತ್ತರವಾದ ಪರ್ವತಗಳಲ್ಲಿ ಅನೇಕ ವನ್ಯ ನುಗಗಳು ಒಗ್ಗಟ್ಟಿನಿಂದ ಬಾಳುತ್ತಿವೆ. ಇಲ್ಲಿರುವ ಅನೇಕ ಜಲಪಾತಗಳಿಂದ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದರಿಂದ ನಮ್ಮ ನಾಡು ಕತ್ತಲಲ್ಲೂ ಬೆಳಕನ್ನು ಕಾಣುತ್ತಿದೆ.
ಶಿವರಂಜನಿ ಎಚ್ ಜಿ(ಸಹಾಯಕ ಪ್ರಾಧ್ಯಾಪಕಿ)
ಕನ್ನಡ ನಾಡಿನ ಗಡಿ ಭಾಗಗಳಲ್ಲಿ ಇರುವ ಸಮುದ್ರ ತೀರಗಳಲ್ಲಿ ತೆರೆಯನ್ನು ಧರಿಸಿ ಸೀರೆಯನ್ನುಟ್ಟಿ, ಪಶ್ಚಿಮ ಘಟ್ಟಗಳಲ್ಲಿ ಕಾಮನಬಿಲ್ಲಿನಂಥ ಕಿರೀಟವನ್ನು ಧರಿಸಿ ಭೂಮಿ ಅಲಂಕೃತಳಾಗಿ ಚೆಲುವೆಯಂತೆ ಕಂಗೊಳಿಸುತ್ತಾ ಇದ್ದಾಳೆ. ಈ ಸಂಪತ್ತು ಗಳೆಲ್ಲವೂ ತಾಯಿ ಭುವನೇಶ್ವರಿಗೆ ಕಿರೀಟ ಪ್ರಯಾಣವಾಗಿವೆ.
ಸಂಪತ್ ಭರಿತಳಾಗಿ ತಾಯಿ ಬಾನತೆಗೆ ಮುತ್ತು ಕೊಟ್ಟು ಶ್ರಮಿಕರ ರಟ್ಟೆಗೆ ಉದ್ಯೋಗ ಒದಗಿಸಿ, ಜೀವನ ನೀಡಿ ಕನ್ನಡಿಗರ ಕಣ್ಗಳಲ್ಲಿ ಪ್ರಕಾಶಮಾನವಾದ ಭರವಸೆಯ ಬೆಳಕನ್ನು ತುಂಬಿದ್ದಾಳೆ.
ಭವ್ಯ ಭವಿಷ್ಯದ ನಾಡೊಂದನ್ನು ಕಟ್ಟುವ ಹುಮ್ಮಸ್ಸಿನಲ್ಲಿರುವ ಕ್ಷಮಿಕರ ಬೆನ್ನು ತಟ್ಟುವ ಮೂಲಕ ಮುಂದಿಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆಯದಂತೆ ನಮಗೆ ಪ್ರೋತ್ಸಾಹಿಸುತ್ತಾ ಧೈರ್ಯವಾಗಿ ನಡೆಯುವ ಶಕ್ತಿ ಕೊಡು ಎಂದು ತಾಯಿ ಭುವನೇಶ್ವರಿಯಲಿ ಪ್ರಾರ್ಥಿಸುತ್ತಾರೆ.
ನಾವೆಲ್ಲರೂ ಒಗ್ಗಟ್ಟಿನಿಂದ ಮೈ ಬೆವರು ಸುರಿಸಿ ದುಡಿದು, ಬಡತನವನ್ನು ತೊಡೆದು ಹಾಕಲು ಶಕ್ತಿಯನ್ನು ಕೊಡು. ನಮ್ಮಲ್ಲಿ ಬೇದ- ಭಾವವನ್ನು ತೊಲಗಿಸು, ಶುಭವನ್ನು ನಮಗೆ ಅರಸು ಎಂದು ಪ್ರಾರ್ಥಿಸುತ್ತಿದ್ದಾರೆ.
ಕರ್ನಾಟಕ ಏಕೀಕರಣವಾದ ಈ ಸಂದರ್ಭದಲ್ಲಿ ಆನಂದ ಸಡಗರ ಪಡುತ್ತಾ, ಉತ್ತಮ ಭವಿಷ್ಯಕ್ಕೆ ದೇವಿಯಲ್ಲಿ ಮೊರೆ ಇಟ್ಟಿದ್ದಾರೆ ಇನ್ನು ಮುಂದೆ ನಾಡು ಛಿದ್ರವಾಗದಾಹಾಗೆ ನಮಗೆಲ್ಲರಿಗೂ ಅನುಗ್ರಹಿಸು ತಾಯಿ ಎಂಬ ಆಶಯ ಈ ಕವಿತೆಯಲ್ಲಿ ಒಡ ಮೂಡಿದೆ/ ಮೂಡಿಬಂದಿದೆ.
No comments:
Post a Comment