Thursday, 19 January 2023

ನನ್ನ ಶಾಲೆ

06- ನನ್ನ ಶಾಲೆ 

-ಜ.ನಾ. ತೇಜಶ್ರೀ 

 'ನನ್ನ ಶಾಲೆ' ಪದ್ಯವೂ ನಾವು ಓದಿದ ಶಾಲೆಯ ಚಿತ್ರಣ  ನೀಡುವುದರ ಜೊತೆಗೆ ಆಧುನಿಕರಣಕ್ಕೆ ಒಳಗಾದಾಗ ಅದರಲ್ಲಿ ಆಗುವ ಮಾರ್ಪಾಡನ್ನು ಚಿತ್ರಿಸುತ್ತದೆ. ಮಾನವ ವೈಜ್ಞಾನಿಕಯುಗಕ್ಕೆ ಕಾಲಿಟ್ಟಂತೆ ಅನೇಕ ಬದಲಾವಣೆ ಒಳಗಾಗುತ್ತಾನೆ. ಶಾಲೆಯಲ್ಲಿದ್ದ ಹಿಂದಿನ ಆಟ-ಪಾಠದಲ್ಲಿ ಹೊಸ ತರದ ರೂಪರೇಷೆಗಳು ಬಂದು ಜನರನ್ನ ಹೆಚ್ಚು ಸೆಳೆಯುವಂತೆ ಮಾಡುತ್ತದೆ. ಭಾವ ಸಂವೇದನೆಗಳಿಗೆ ಅಲ್ಲಿ ಅವಕಾಶವೇ ಇರುವುದಿಲ್ಲ. ಕೇವಲ ಸವಿ ನೆನಪುಗಳನ್ನು ಮಾತ್ರ ಮಿಲುಕು ಹಾಕಬೇಕು.

ಜ.ನಾ. ತೇಜಶ್ರೀಯವರು ಹುಟ್ಟಿ ಬೆಳೆದ ಪರಿಸರವನ್ನು ಬಣ್ಣಿಸುತ್ತಲೆ ಮೊದಲಿನ ಸ್ಥಿತಿ ಕಳೆದುಕೊಂಡ ಶಾಲೆಯ ಬಗೆಗಿನ ನೆರವಿನ ಛಾಯೆ ಇದೆ ಹಿಂದೆ ತಾನು ಆಡಿ ಬೆಳೆದ ಸ್ಥಳ ಇವತ್ತು ಮಾಯವಾಗಿ ಆ ಸ್ಥಳದಲ್ಲಿ ಹೊಸತು ಕಟ್ಟಡ ನಿರ್ಮಾಣವಾಗಿದೆ. ಅದರಲ್ಲೂ ಎಲ್ಲರ ಪಾಲಿನ ಬಹಳ ಪ್ರಮುಖ ಕೇಂದ್ರ ಸ್ಥಾನ ಶಾಲೆ. ಶಾಲೆಯಲ್ಲಿ ಕಲಿತ ವಿದ್ಯೆಯಿಂದ ಹಿಡಿದು ಅಲ್ಲಿ ಆಡಿದ ಆಟ-ಪಾಠ ಕಣ್ಣಿಗೆ ಕಟ್ಟುವಂತೆ ಮನಸ್ಸಿನಲ್ಲಿ ತಳವೂರಿರುತ್ತದೆ. ಅದನ್ನು ಬಣ್ಣಿಸುತ್ತಲೇ ಸುಖ-ಸಂತೋಷವನ್ನು ಅನುಭವಿಸುತ್ತಾ ಇವತ್ತಿನ ಸ್ಥಿತಿಗತಿಯ ಬಗ್ಗೆ ಮರುಕದ ಎಳೆ ಇರುವುದನ್ನು ಕವಿತೆಯಲ್ಲಿ ಕಾಣಬಹುದು. ಶಾಲೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸುವ ತಾಣ. ಎಷ್ಟೋ ಜನ ವೈದ್ಯರನ್ನು, ಅಭಿಯಂತರನ್ನು, ವಿಜ್ಞಾನಿಗಳನ್ನು, ಮೇಧಾವಿಗಳನ್ನು, ಸಂತರನ್ನು-ಹೀಗೆ ಅನೇಕ ವ್ಯಕ್ತಿಗಳನ್ನು ರೂಪಿಸುವ ಜಾಗ, ಹಾಗಾಗಿ ಆ ಸ್ಥಳವನ್ನು ಯಾರು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಜೀವನದಲ್ಲಿ ಮತೇ ಮತೇ ಮೆಲುಕು ಹಾಕುತ್ತಾ ಶಾಲೆಯ ನೆನಪನ್ನು ಸವಿಯುತ್ತಾರೆ.

ಒಂದು ಕಾಲಘಟ್ಟದಲ್ಲಿ ಪ್ರೀತಿ-ವಿಶ್ವಾಸ, ಮಾನವೀಯ ಅಂತ ಕರಣ ಮೊದಲಾದ ಅಂಶಗಳು ರೂಪುಗೊಳ್ಳುವಂತೆ ಮಾಡಿದ ಶಾಲೆ, ಇವತ್ತು ತನ್ನ ಗತವೈಭವವನ್ನು ಕಳೆದುಕೊಂಡು ಆಧುನಿಕರಣದತ್ತ ಮುಖ ಮಾಡಿರುವುದೇ ಇಲ್ಲಿಯ ದುರಂತ. ಉದಾಹರಣೆಗೆ ಜಾರಗುಪ್ಪೆಯನ್ನು ಗಮನಿಸುವುದಾದರೆ ಇಂದು ಆ ಶಾಲೆಯಲ್ಲಿ ಅದರ ನಾಮಾವಶೇಷವು ಇಲ್ಲ. ಆ ಜಾರುಗುಪ್ಪೆಯಲ್ಲಿ ಆಡಿದ ಆಟ ಮಾತ್ರ ಹಚ್ಚ ಹಸಿರಾಗಿಯೇ ಕಣ್ಣಲ್ಲಿ ಕಟ್ಟಿದಂತೆ ಇದೆ.

ಕವಿಯಿತ್ರಿಯವರು ಎಷ್ಟೋ ಅಕ್ಕಂದಿರು ಆ ಜಾರುಗುಪ್ಪೆಯಲ್ಲಿ ಆಡಿದ್ದರು. ಕುಡಿದು ಕುಪ್ಪಳಿಸಿದರು, 'ನಾನಾದ ಮೇಲೆ ಎಷ್ಟೋ ಜನವೋ' ಎಂದು ಯೋಚಿಸುತ್ತಲೇ ಆ ಜಾರಗುಪ್ಪೆ ಈಗಿಲ್ಲ. ಅದರ ಮೇಲೆ ಜಾರಿ ಹರಿದ ಸಮವಸ್ತ್ರ ಮಾತ್ರ ನನ್ನಲ್ಲಿದೆ ಜೊತೆಗೆ ಆ ಸುಂದರ ನೆನಪುಗಳಾದ ಇನ್ನೂ ಹಸಿರಾಗಿವೆ ಎಂಬ ನೆನಪುಗಳ ಬೆನ್ನು ಹತ್ತಿದ್ದಾರೆ.

ಕೆತ್ತಿ ಕೆತ್ತಿ ಗೋರಿದ ಮರದಿಂದ ಗೋರಿದು ತೆಗೆಯುವ ಕಾಯಕ ಮಾತ್ರ ಹಾಗೆಯೇ ಮುಂದುವರಿದಿದೆ. ಹಿಂದಿನ ಶಾಲಾ ಕಟ್ಟಡ ನೆಲಸಮವಾಗಿ ಹೊಸ ಕಟ್ಟಡ ನಿರ್ಮಾಣವಾಗಿದೆ. ಇದು ಆಧುನಿಕರಣದ ಸಂಕೇತ ಹೊಸತು ಬಂದಾಗ ಅದನ್ನು ಸ್ವೀಕರಿಸುತ್ತಾ ಸಾಗುವುದೇ ಜೀವನ. ಅಳತೆ ನೆನಪಿನಲ್ಲಿ ಅದು ಕೊಡುವ ನೆನಪಿನ ಆಹ್ಲಾದ ಅಳಿಸಲಾರದ ಸಂತೋಷವನ್ನು ನೀಡುತ್ತದೆ.

ನನ್ನ ಶಾಲೆ ಹೀಗಿತ್ತು ಎಂಬುದನ್ನು ಮುಂದಿನ ಪೀಳಿಗೆಗೆ ಕಟ್ಟಿಕೊಡಬೇಕು. ಆಗ ಅದರ ಕಲ್ಪನೆಯ ಚಿತ್ರ ಮೂಡಿಸುಲು ಸಾಧ್ಯ. ಅದು ಕೊಡುತ್ತಿದ್ದ ಆನಂದವನ್ನು ಪದಗಳಲ್ಲಿ ಮಾತ್ರ ವರ್ಣಿಸುವುದು ಹಳತು ಹೊಸತಾಗುವ, ಹೊಸತ್ತು ಹಳೆತಾಗಿ, ಮತ್ತೆ ಹೊಸತಾಗುತ್ತಲೆ ಜಗತ್ತಿಗೆ ಬೇಕಾದಂತೆ ಬದಲಾಗುವ ಆಶಯವನ್ನು ಇಲ್ಲಿ ಕಾಣಬಹುದು.

 ಇಂದು ನಾವು ಜಾಗತೀಕರಣವೆಂಬ ಕೆಡಂಭೂತದ ತೆಕ್ಕೆಯೊಳಗೆ ಸಿಕ್ಕಿಹಾಕಿಕೊಂಡು ಯಂತ್ರ ಮಾನವನಾಗಿ ಜೀವಿಸುವ ಕಾಲಘಟ್ಟದಲ್ಲಿದ್ದೇವೆ. ಇದರಿಂದ ಕಳಸಿಕೊಂಡು ಬರಲಾರದ ಸ್ಥಿತಿಯಲ್ಲಿರುವುದನ್ನು ಈ ಕವಿತೆ ಬಿಂಬಿಸುತ್ತದೆ.

ಹಳೆ ಶಾಲೆಗಳನ್ನು ಕೆಡವಿದರೂ ಆ ಭಗ್ನ ಅವಶೇಷಗಳಂತೆ ನೆನಪುಗಳು ಭಾಗ್ನವಾಗುವುದಿಲ್ಲ ಸಮಾಧಿಯಾಗುವುದಿಲ್ಲ ಬದಲಾಗಿ ಶಾಲೆಯಲ್ಲಿ ಕಲಿತ ಜ್ಞಾನದಿಂದ, ಕಷ್ಟ-ಸುಖ, ನೋವು-ನಲಿವು ಕೊಟ್ಟ ಅನುಭವದಿಂದ ಜೀವನಕ್ಕೆ ಒಂದು ಭದ್ರಬುನಾದಿ ಸಿದ್ಧವಾಗುತ್ತದೆ, ಹಳೆಯ ನೆನಪುಗಳ ಜೀವಕೊಡುತ್ತದೆ.

ಜಾಗತೀಕರಣವು, ಸಮಕಾಲೀನ ಜಗತಿಕ ವಿದ್ಯಮಾನವಾಗಿದ್ದು ಅದು ಇಂದು ಆಯ್ಕೆಯಾಗಿ ಉಳಿದಿಲ್ಲ ಅದು ಬೇಕಾಗಲಿ, ಬೇಡವಾಗಲಿ ಎಲ್ಲಾ ರಾಷ್ಟ್ರಗಳು ಅನಿವಾರ್ಯವಾಗಿ ಒಳಗಾಗುತ್ತಿರುವ ಒಂದು ಪ್ರಕ್ರಿಯೆಯಾಗಿದೆ.

No comments:

Post a Comment

ನನ್ನ ಶಾಲೆ

06- ನನ್ನ ಶಾಲೆ  -ಜ.ನಾ. ತೇಜಶ್ರೀ   'ನನ್ನ ಶಾಲೆ' ಪದ್ಯವೂ ನಾವು ಓದಿದ ಶಾಲೆಯ ಚಿತ್ರಣ   ನೀಡುವುದರ ಜೊತೆಗೆ ಆಧುನಿಕರಣಕ್ಕೆ ಒಳಗಾದಾಗ ಅದರಲ್ಲಿ ಆಗುವ ಮಾರ್ಪಾ...