Thursday, 19 January 2023

ಗಿರಣಿ ವಿಸ್ತಾರ ನೋಡಮ್ಮ

 05- ಗಿರಣಿ ವಿಸ್ತಾರ ನೋಡಮ್ಮ

-ಶಿಶುನಾಳ ಶರೀಫ ಸಾಹೇಬ


ಕರ್ನಾಟಕದ ಕಬೀರ ಎಂದು ಕರೆಸಿಕೊಂಡ ಕನ್ನಡದ ಮಹಮ್ಮದೀಯ ಸಂತ ಕವಿ ಶಿಶುನಾಳ ಶರೀಫ ಸಾಹೇಬರು ಧಾರವಾಡ ಜಿಲ್ಲೆಯ ಶಿಶುನಾಳ ಎಂಬ ಊರಿನವರು. ಉತ್ತರ ಕರ್ನಾಟಕದ ಜನಪ್ರಿಯ ಮತ್ತು ಅನುಭಾವಿ ಕವಿಯಾದ ಶರೀಫರು ಜಾತಿ-ಮತಗಳ ಗಡಿಯನ್ನು ದಾಟಿ ಹರಿ-ಹರ ಹಾಜರತ್ ತತ್ವಗಳ ಸಂಗಮವಾಗಿ ಕಾಣಿಸುತ್ತಾರೆ.

ಈ ಪದ್ಯ ಭಾಗವೂ ಜಾಗತೀಕರಣದ ಸಂದರ್ಭದಲ್ಲಿ ಹತ್ತಿ ಗಿರಣಿಯು ಹೊಸ ಆವಿಷ್ಕಾರವನ್ನು ತೆರೆದಿಡುತ್ತದೆ. ಜನರಿಗೆ ಹೇಗೆ ಕುತೂಹಲವನ್ನು ಮಾಡಿಸಿತು ಎಂಬುದರ ಬಗ್ಗೆ ತಿಳಿಸುತ್ತದೆ. ಶರೀಫರು ಹತ್ತಿ ಗಿರಣಿಯ ಚಟುವಟಿಕೆಗಳ ಬಗ್ಗೆ ಹೇಳುತ್ತಾಲೆ ತಾತ್ವಿಕತೆಯೆಡೆಗೆ ಕೊಂಡೊಯ್ಯುತ್ತಾರೆ. ಮಾನವ ಸೃಷ್ಟಿಸಿದ ಯಂತ್ರಕ್ಕಿಂತ ದೈವ ಸೃಷ್ಟಿಸಿದ ದೇಹವೆಂಬ ಯಂತ್ರವೇ ಅವರಿಗೆ ಬೆರಗಾಗಿ ಕಾಣಿಸುತ್ತದೆ. ಇಲ್ಲಿ ಕವಿ ಗಿರಣಿ ವಿಸ್ತಾರವನ್ನು ಆಧ್ಯಾತ್ಮಿಕದ ನೆಲೆಗಟ್ಟಿನಲ್ಲಿ ಪರಿಭಾವಿಸುತ್ತಾರೆ. ಅದಕ್ಕೆ ರೂಪ ಪ್ರತಿಮೆಗಳಾಗಿ ಹೊರಹೊಮ್ಮುವ ಯಂತ್ರ ಮತ್ತು ದೇಹವನ್ನು ಸಮೀಕರಿಸಿ ಸಾಮ್ಯತೆಯನ್ನು ಸಾಂದರ್ಭಿಕ ವಿಷಯ ಸನ್ನಿವೇಶವನ್ನು ಹೇಳ ಹೊರಟಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮವಾಗಿ ಆರಂಭವಾದ ಗಿರಣಿಗಳ ಕಂಡ ಜನರಿಗೆ ಬಹಳ ಆಶ್ಚರ್ಯವಾಯಿತು. ಜನರು ಕೈ ಮಗ್ಗದಲ್ಲಿ ನೀಡುತ್ತಿದ್ದ ಬಟ್ಟೆಗಳು, ಈಗ ಯಂತ್ರಗಳಿಂದ ಸಿದ್ಧವಾಗುತ್ತಿದ್ದವು. ಮಹಾರಾಜ,ರಾಣಿ ಕರ್ನಾಟಕದಲ್ಲಿ ಹತ್ತಿ ಗಿರಣಿಯನ್ನು ಪ್ರಾರಂಭಿಸಿದ್ದಾರೆ. ಇದು ನಿಜಕ್ಕೂ ಎಲ್ಲರಿಗೂ ಆಶ್ಚರ್ಯವೇ ಸರಿ ಎಂದು ಹೇಳುತ್ತಾ... ಮನುಷ್ಯನ ದೇಹವನ್ನು ಗಿರಣಿಗೆ ಹೋಲಿಸುತ್ತಾ ಧರಣಿ ಪತಿ ಈಶ್ವರ ಮತ್ತು ಅದರೊಳಗೆ ಜರುಗುವ ಕೆಲಸವುಗಳು ಬಹಳ ಆಶ್ಚರ್ಯ ಹುಟ್ಟಿಸುತ್ತವೆ ಎಂದಿದ್ದಾರೆ.

ಗಿರಣಿಯಲ್ಲಿ ಜಲ, ಅಗ್ನಿ, ವಾಯುವಿನ ಬಳಕೆಯಿಂದ ಕೆಲಸ ನೆರವೇರುತ್ತದೆ. ಯಂತ್ರಗಳು ಚಲಿಸುತ್ತಿರುವಂತೆಯೇ ಕೊಡವೆಯ ಆಕಾರದೆತ್ತರಕ್ಕೆ ಹೊಗೆ ಹರಡುವುದನ್ನು 'ಚಲುವ ಮಧ್ಯದ ಕಂಬವೋ' ಎಂದು ಅಚ್ಚರಿ ಪಟ್ಟಿದ್ದಾರೆ. ದೇಹವೆಂಬ ಗಿರಣಿಯು ಜಲ, ಅಗ್ನಿ, ವಾಯು, ಆಕಾಶ, ಭೂಮಿ ಎಂಬ ಪಂಚಭೂತಗಳಿಂದ ಮಾಡಿದ್ದು, ದೇಹದೊಳಗಿನ ಅಂಗಾಂಗಗಳು ಯಂತ್ರದಂತೆ ಕೆಲಸ ನಿರ್ವಹಿಸುತ್ತವೆ. ಮಾನವನ ದೇಹದ ರಚನೆಯ ಅಚ್ಚರಿಯನ್ನು ಇಲ್ಲಿ ಸ್ಮರಿಸಿದ್ದಾರೆ.

ಗಿರಣಿಯ ಯಂತ್ರದಲ್ಲಿ ಒಂಬತ್ತು ಹಲ್ಲುಗಳಿವೆ ನೂಲಿಗೆ ಆಧಾರವಾಗಿ ಹುಳಿ ಇದ್ದ ಕೊಳವೆಗಳು ನೋವ ಎಳೆಗಳನ್ನು ತುಂಬುತ್ತ ಇರುತ್ತದೆ. ಗಿರಣಿಯಲ್ಲಿ ದಾರ ಸಿದ್ದ ವಾಗುವ ಕ್ರಿಯೆ ಚಮತ್ಕಾರದಂತೆ ನಡೆಯುವುದನ್ನು ಶರೀಫರು ಇಲ್ಲಿ ಹೇಳಿದ್ದಾರೆ.

ಮಾನವನ ದೇಹದಲ್ಲಿ ಒಂಬತ್ತು ರಂಧ್ರಗಳಿವೆ. ಪ್ರತಿಯೊಂದು ಅಂಗಾಂಗವು ತನ್ನ ಕಾರ್ಯದಲ್ಲಿ ಪ್ರತಿಕ್ಷಣವೂ ಮಗ್ನವಾಗಿರುತ್ತದೆ. ಎಲ್ಲಾ ಕ್ರಿಯೆಯನ್ನು ನಿಯಂತ್ರಿಸುತ್ತದೆ. ಷಡ್ಚಕ್ರಗಳು ಮಾನವನ ಆಧ್ಯಾತ್ಮದ ಸೂತ್ರವನ್ನು ಹಿಡಿದಿರುತ್ತದೆ.

ಬೀಜದ ಜೊತೆಗಿರುವ ಹತ್ತಿಯನ್ನು ಬೀಜದಿಂದ ಬೇರ್ಪಡಿಸಿ ಶುದ್ಧ ಹತ್ತಿಯ ಸುರುಳಿಯನ್ನು ಸಿದ್ಧಪಡಿಸಿ ಚಕ್ರದ ಮೇಲೆ ಸಂಚರಿಸುವಂತೆ ಮಾಡಿದರೆ ದಾರದ ಉಂಡೆ (ಕುಕ್ಕಡಿ) ಸಿದ್ಧವಾಗುತ್ತದೆ.

ಮಾನವನ ಸ್ವಭಾವವು ಶುದ್ಧ ಹತ್ತಿಯಂತೆ ನಿರ್ಗುಣ ಸ್ವಭಾವದಾಗಿತ್ತು ಎಂಬ ಗಲಿಗಳಿಗೆ ( ನಾಡಿಗಳಿಗೆ ) ಸಂಚರಿಸಿ ಶುದ್ಧವಾದ ಶ್ವಾಸವು ಹಿಂಜಿದ ಅರಳೆಯಂತೆ ನಾಡಿಯಲ್ಲಿ ಸಂಚರಿಸಿದಾಗ ಮಾನವನಿಗೆ ಆಧ್ಯಾತ್ಮ ಜ್ಞಾನವು ಸಿದ್ದಿಸುತ್ತದೆ. ಆಗ ಮನುಷ್ಯ ಪರಿಪೂರ್ಣತೆಯನ್ನು ಪಡೆದವನಾಗುತ್ತಾನೆ.

ಈ ರೀತಿ ಸಿದ್ಧವಾದ ನೂಲು ಸಾಮಾನ್ಯವಾದದ್ದಲ್ಲ ಅದು ಪರಬ್ರಹ್ಮ ಪಟ್ಟ (ರೇಷ್ಮೆ ಸೀರೆ) ಇಂತಹ ದಿವ್ಯವಾದ ರೇಶಿಮೆಯ ನೂಲನ್ನು ಸಿದ್ಧಗೊಳಿಸಿ, ದೇವಾಂಗ ಋಷಿಯಿಂದ ನೇಯಿಸಿ ಹಚ್ಚಡವನ್ನು (ಹೊದಿಕೆ) ಬ್ರಹ್ಮನು ಸಿದ್ಧಗೊಳಿಸುತ್ತಾನೆ. ಈ ಹಚ್ಚಡವನ್ನು ಹಚ್ಚಿಕೊಂಡು ಲೋಕದ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು.

ಈ ರೀತಿ ಗಿರಣಿಯ ಭೌತಿಕ ವರ್ಣನೆಯಿಂದ ಪ್ರಾರಂಭವಾದ ಈ ರಚನೆ, ಗಿರಣಿಯನ್ನು ಮಾನವನಿಗೆ ಹೋಲಿಸಿ ಅವನ ಒಳಿತನ್ನು ಅವರಿಗೆ ನೆನಪಿಸುವುದರೊಂದಿಗೆ ಮುಕ್ತಾಯವಾಗುತ್ತದೆ.

ಜನರಿಗೆ ಹೊಸದಾಗಿ ನಿರ್ಮಿತವಾದ ಹತ್ತಿ ಗಿರಣಿಯು ಬೆರಗನ್ನುಂಟುಮಾಡಿದರೆ ಕವಿಗೆ ಅದಕ್ಕಿಂತ ಮಿಗಿಲಾಗಿ ಶರೀಫರೆಂಬ ಯಂತ್ರವೇ ಅದ್ಭುತವಾಗಿ ಕಾಣುತ್ತದೆ. ಅಂದರೆ ಮಾನವ ಸೃಷ್ಟಿಗಿಂತ ದೈವ ಸೃಷ್ಟಿ ಮಿಗಿಲಾಗಿದೆ ಎಂಬುದು ಕವಿಯ ಅಭಿಪ್ರಾಯ. ಅದನ್ನು ಜೀವ-ನಿರ್ಜೀವಗಳ ಹಿನ್ನೆಲೆಯಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮಾನವ ನಿರ್ಮಿತ ಯಂತ್ರದ ಜೊತೆಗೆ ದೈವ ಸೃಷ್ಟಿಸಿದ ದೇಹವೆಂಬ ಯಂತ್ರವನ್ನು ಸಮೀಕರಿಸಿಕೊಂಡು ಹೇಳಿರುವ ಕವಿ ಶರೀಫರು ಯಂತ್ರ ನಾಗರಿಕತೆಯ ರೂಕ್ಷತೆಯನ್ನು ನೀಡಿದ್ದಾರೆ.

No comments:

Post a Comment