04-ಹಂಪೆಯಲ್ಲಿ
-ಜಿ.ಎಸ್. ಶಿವರುದ್ರಪ್ಪ
ಜಿಎಸ್ಎಸ್ ಎಂದು ಖ್ಯಾತರಾದ ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪನವರು ಶಿವಮೊಗ್ಗ ಜಿಲ್ಲೆಯ ಈಸೂರಿನಲ್ಲಿ 1926ರಲ್ಲಿ ಜನಿಸಿದರು. ಕನ್ನಡ ಸರಸ್ವದ ಲೋಕದಲ್ಲಿ ತಮ್ಮ ಹತ್ತಾರು ಕೃತಿಗಳ ಮೂಲಕ ಓದುಗರ ಮನ ಸೆಳೆದಿದ್ದಾರೆ.
ಭಾರತೀಯ ಸಾಹಿತ್ಯ, ಅದರಲ್ಲೂ ಪ್ರಮುಖವಾಗಿ ಕನ್ನಡ ಸಾಹಿತ್ಯದಲ್ಲಿ ವಿಜಯನಗರ ಸಾಮ್ರಾಜ್ಯದ ಗತವೈಭವದ ಕುರಿತ ಹನಿಗಮನಗಳಿಂದ ಹಿಡಿದು ಬೃಹತ್ ಪುಟಗಳವರೆಗಿನ ಸಂಪುಟಗಳೇ ರಚನೆಯಾಗಿವೆ. ಈ ಹಿನ್ನೆಲೆಯಲ್ಲಿ ಜಿಎಸ್ಎಸ್ ಅವರ 'ಹಂಪೆಯಲ್ಲಿ' ಎಂಬುದು ಕಲೆಯ ಮಹತ್ವವನ್ನು ತಿಳಿಸುವ ಪ್ರಸಿದ್ಧ ಕವಿತೆಯಾಗಿದೆ. ಈ ಕವಿತೆಯ ಮುಖ್ಯ ವಸ್ತುವೆಂದರೆ ಪ್ರಾಚೀನ ಕಲೆ, ಸಂಸ್ಕೃತಿ ಮತ್ತು ಸಂಗೀತ ವೈಭವಗಳು ಮನುಷ್ಯನ ದುರಾಸಿಯ ಪರಿಣಾಮವಾಗಿ ಹೇಗೆ ವಿಕಾರಗೊಂಡವು ಎಂಬುದನ್ನು ವಿವರಿಸುವುದಾಗಿದೆ. ಅಲ್ಲದೆ ಇಲ್ಲಿ ಕಲೆಯ ಬಗ್ಗೆ ಕವಿ ಗಿರುವ ಅಪಾರ ಗೌರವ ವ್ಯಕ್ತವಾಗಿದೆ.
ಹಾಳು ಹಂಪಿಯ ಗತವೈಭವವನ್ನು ಸಂತುಲ ವೀಕ್ಷಿಸುತ್ತ ಕವಿ ವಿಸ್ತಾರವಾದ ಹಾಳು ಬಿದ್ದ ಪುರಾತನ ಕಟ್ಟಡಗಳು ಶತ್ರುಗಳಿಂದ ಆದ ದಾಳಿಯ ಭೀಕರತೆಯನ್ನು 'ಗೋಳು' ಎಂಬ ವ್ಯಾಖ್ಯಾನಿಸಿದ್ದಾರೆ. ಈ ದಾಳಿಯಿಂದ ನಾರಳಿದವರೆಷ್ಟೋ!! ಪಾಳು ಬಿದ್ದ ಗೋಡೆಗಳಲ್ಲಿ ಈ ಗೋಳಿನ ನೆರಳು ಕವಿಗೆ ಕಂಡಿದೆ. ಗೋಡೆಗಳಲ್ಲಿ ಕಂಡ ಬಿರುಕಿನಲ್ಲಿ (ತುದಿಯ ಬಿರುಕಿನಿಂದಂತೆ ಕಾಣುತ್ತಿದೆ) ಬೆಳಕು ತೂರಿ ಬರುತ್ತಿದೆ. ಈ ಬೆಳಕು ಸಾವಿರಾರು ಜನರ ಭಿನ್ನ ಬಯಕೆಗಳ ಪ್ರತೀಕವಾಗಿದೆ.
ಈ ಜಾಗವನ್ನು ನೋಡಿದರೆ ಇಲ್ಲೊಂದು ಬಲಶಾಲಿ ಸಾಮ್ರಾಜ್ಯವಿತ್ತೇ? ಎಂಬ ಅನುಮಾನ ವ್ಯಕ್ತವಾಗುತ್ತಿದೆ ಕವಿಗೆ. ಚಿನ್ನದ ಭೂಮಿಯಂತಿದ್ದ ಈ ಭೂಮಿಯಲ್ಲಿ ಕಲ್ಲು ಮಣ್ಣು ತೂರಿ ಬರುತ್ತಿದೆ. ಈ ಭೂಮಿಯಲ್ಲಿ ರಾಜರ ಒಡ್ಡೋಲಗ (ರಾಜ್ಯಸಭೆ) ನಡೆಯುತ್ತಿತ್ತೇ?! ಅಂದಿನ ದಸರಾ ನಡೆಯುತ್ತಿದ್ದ ಮಹಾನವಮಿ ದಿಬ್ಬ ಇಂದು ಬರೀ ಕಲ್ಲಿನ ದಿಬ್ಬವಾಗಿದೆ. ಅಂದು ರಾಜ-ರಾಣಿಯರ ವಿಲಾಸಿ ಸ್ನಾನದ ಕೊಳಗಳು ಇಂದಿಗೂ ವೈಭವಕ್ಕೆ ಸಾಕ್ಷಿಯಾಗಿವೆ.
ಶಿವರಂಜನಿ ಎಚ್ ಜಿ(ಸಹಾಯಕ ಪ್ರಾಧ್ಯಾಪಕಿ)
ಗಜ, ತುರಾಗ, ರಥದ ಸಾಲುಗಳು ಸದಾ ಯುದ್ಧಕ್ಕೆ ಸಿದ್ದರಾಗಿ ನಿಂತು ಶತ್ರುಗಳಿಗೆ ಶಕ್ತಿ ಪ್ರದರ್ಶನ ಮಾಡುತ್ತಿದ್ದರು. ಆದರೆ ಅವೆಲ್ಲವೂ ನಿಜವಾಗಿಯೂ ಇತ್ತೇ? ಎಂದು ಪ್ರಶ್ನೆಗಳೇಳುವಂತೆ ಸಾಮ್ರಾಜ್ಯ ಹಾಳಾಗಿದೆ. ಅಲ್ಲೆಲ್ಲಾ ಗಿಡ-ಬಳ್ಳಿಗಳು ಬೆಳೆದು ಅವಶೇಷವೂ ಕಾಣದಂತಾಗಿದೆ ಛತ್ರಿಯಂತೆ ಮರೆಮಾಚಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಹಾಳು ಹಂಪೆಯನ್ನು ವೀಕ್ಷಿಸುತ್ತ ಮುಂದುವರೆದು ಒಂದು ಕ್ಷಣ ನಿಂತು ಜಿಎಸ್ಎಸ್ ನಾಟ್ಯಮಂದಿರವನ್ನು ಕಂಡು ನಿಂತರು. ಅದ್ಭುತ ನಾಟ್ಯಮಂದಿರದಲ್ಲಿ ಅಂದು ಎಂತೆಂಥ ನರ್ತನ ಪ್ರದರ್ಶನಗಳು ನಡೆದಿತೋ ಎಂದು ಗತ ವೈಭವವನ್ನು ಕಣ್ಣೆದುರಿಗೆ ತಂದುಕೊಳ್ಳುವ ಮುನ್ನವೇ ಅಲ್ಲಿ ಬಾವುಲಿಗಳು ಸ್ವಚ್ಛಂದವಾಗಿ ಹಾರಾಡುತ್ತಿರುವುದನ್ನು ಕಂಡು ಕ್ಷಣ ಕಾಲ ಮಂಕಾದರು.
ಹಂಪೆಯಲ್ಲಿ ಹಜಾರ ರಾಮಸ್ವಾಮಿಯ ತಂಬೂರಿಯ ಧ್ವನಿ ತುಂಬಿ ತುಳುಕುತ್ತಿತ್ತು. ಆದರೀಗೆ ಗಂಭೀರ ಧ್ವನಿ ಹರಿಯುತ್ತಿದ್ದೆ. ಇದೇ ಜಾಗದಲ್ಲಿ ವಿವಿಧ ವಾದ್ಯದ ಹೊನಲು ಹೊಮ್ಮಿ ಬಹುಕಲಾ ಪರಿಣತಿ ಪಡೆದ ವಿವಿಧ ಲಲನಾ ಮಣಿಯರು ಗೆಜ್ಜೆ ಕಟ್ಟಿ ನರ್ತಿಸಿದ್ದರು. ಈ ಶೃತಿ, ಲಯ, ತಾಳಕ್ಕೆ ಮಂದಿರವೇ ರೋಮಾಂಚನಗೊಂಡಿತ್ತು. ಆದರೆ ಈಗ ಹಳೆಯ ನೆನಪುಗಳ ಸಂಪುಟಗಳಿವೆಯೇ ಹೊರತು ನಿಜ ವೈಭವವೆಲ್ಲ ಹೂತು ಹೋಗಿದೆ. ಈಗ ಈ ಹಾಳು ಹಂಪೆಯಲ್ಲಿ, ಹಳೆಯ ನೆನಪುಗಳ ಸಂಚರವಾಗುತ್ತಿವೆ. ದಿವ್ಯ ವೈಭವಕ್ಕೆ ಶತ್ರುಗಳು ಗೋರಿ ಕಟ್ಟಿದ್ದಾರೆ.
ವಿಜಯನಗರ ಶಿಲ್ಪ ಕಲೆಗೆ ಸುಪ್ರಸಿದ್ಧವಾದ ನಾಡು. ಇಲ್ಲಿ ಅನೇಕ ಅಪೂರ್ವ ಶಿಲ್ಪ ಕಲೆಗಳು ಅರಳಿವೆ. ಉಗ್ರನರಸಿಂಹ ಮೂರ್ತಿಯನ್ನು ಕಂಡ ಕವಿ ಪುರಾಣಗಳಲ್ಲಿ ಉಗ್ರನರಸಿಂಹನ ಭಕ್ತರನ್ನು ಉದ್ದರಿಸಲು ಕಂಬವನ್ನು ಒದೆದು ಮೂಡಿ ಬಂದನು. ಆದರೆ ಈ ಹಾಳು ಹಂಪೆಯಲ್ಲಿ ಅವನೇ ಬಗ್ನನಾಗಿದ್ದಾನೆ. ಅದರ ಪಕ್ಕದಲ್ಲಿಯೇ ಎತ್ತರದಲ್ಲಿ ಶಿವಲಿಂಗ ಕುಳಿತಿದ್ದಾನೆ. ಅಲ್ಲೇ ಸಾಸಿವೆ ಕಾಳು ಗಣಪ. ಗಾತ್ರದಲ್ಲಿ ಮಾತ್ರ ಗಜಭೀವನ ಆಕಾರ. ಅಲ್ಲಿಯೇ ಜೈನರ ಬಸದಿಯೂ ತಪಸ್ವರ್ಯವಾಗುವಂತೆ ತೋರುತ್ತದೆ. ವಿಜಯ ವಿಠಲ ದೇವಾಲಯವು ಕಲೆಗಳ ಬೀಡೆಂದು ಖ್ಯಾತಿಯಾಗಿತ್ತು. ಇದಕ್ಕೆ ಸಾಕ್ಷಿಯಾಗಿ ಅಲ್ಲಿಯೇ ರಥವಿದೆ. ಹಜಾರರಾಮನ ಗಡಿ ಮೌನವಾಗಿ ಎಲ್ಲೆಲ್ಲೂ ನಿಶಬ್ದವಾಗಿದೆ ಉದ್ದಂಡ ವೀರಭದ್ರನೂ ತನ್ನ ಕಲೆಯನ್ನು, ಶಕ್ತಿಯನ್ನು ಕಳೆದುಕೊಂಡು ಮಂಕಾಗಿದ್ದಾನೆ. ಎಂತೆಂಥಾ ಅದ್ಭುತ ಚೆಲುವಿನ ಕಲೆಯು ಅರಳಿದ್ದವು. ಈ ಕಲೆಯ ಕೊರಳನ್ನು ಶತ್ರುಗಳು ಸಮರದಲ್ಲಿ ಮುರಿದಿದ್ದಾರೆ. ಈ ಬಗ್ನವಶೇಷಗಳನ್ನು ಕಂಡಾಗ ಎಂಥವರಿಗೂ ಕಣ್ಣೀರು ಬಾರದೆ ಇರದು. ಇಂತಹ ಕಲೆಯನ್ನು ಬಳಸದಿದ್ದರೆ ನಮ್ಮದು ಒಂದು ಬಾಳು ಎನಿಸುತ್ತದೆಯೆ ? ಮನುಷ್ಯ ಮನುಷ್ಯತ್ವವನ್ನು ಮರೆತು ಕ್ರೂರ ಮೃಗವಾದಾಗ ಆ ಕ್ರೂರ ಮೃಗಗಳಿಗಿಂತಲೂ ಕಡೆಯಾಗುತ್ತಾನೆ.
ಒಂದು ಕಾಲದಲ್ಲಿ ಸಂಸ್ಕೃತಿಕವಾಗಿ, ರಾಜಕೀಯವಾಗಿ, ಕಾಲಾತ್ಮಕವಾಗಿ ವೈಭವದ ಪರಾಕಾಷ್ಟೆಯಲ್ಲಿದ್ದ ಹಂಪಿ ಬಹುಮನಿ ಸುಲ್ತಾನರ ವಿಧ್ವಂಸಕ ದಾಳಿಯಿಂದಾಗಿ ಶಿವನ ಮನೆಯಂತೆ ಆದುದರ ಕುರಿತು ವಿಷಾದಿಸುತ್ತಾರೆ. ಕವಿತೆಯು ಹಂಪೆಯ ಹಿಂದಿನ ವೈಭವವನ್ನು ಹೇಳುತ್ತಲೇ ಪ್ರಸ್ತುತತೆಯನ್ನು ಕಟ್ಟಿ ಕೊಟ್ಟಿರುವುದು ಕವಿಯ ಜಾರ್ಣೆಗೆ ಹಿಡಿದ ಕನ್ನಡಿ ಎಂದರೆ ತಪ್ಪಿಲ್ಲ.
No comments:
Post a Comment